Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಅಂಕಿ-ಅಂಶದಲ್ಲಿ ಶತಕ ಬಾರಿಸಲು ಗೋಪಾಲಕೃಷ್ಣ ಸಜ್ಜು

Wednesday, 13.06.2018, 3:03 AM       No Comments

|ರಘುನಾಥ್ ಡಿ.ಪಿ.

ಬೆಂಗಳೂರು: ‘ಆಟಗಾರರ ಜೀವನ ಸೀಮಿತ. ಆಟಗಾರರ ಅಂಕಿ-ಅಂಶಗಳು ಜೀವನ ಪರ್ಯಂತ’ – ಇದು ಕ್ರಿಕೆಟ್ ಅಂಕಿ-ಅಂಶ ತಜ್ಞ ಎಚ್.ಆರ್. ಗೋಪಾಲಕೃಷ್ಣ ಅವರ ಮಾತು. ಕ್ರಿಕೆಟ್​ನಲ್ಲಿ ಆಟಗಾರರೇ ಆಗಲಿ, ಮೈದಾನದಲ್ಲಿ ಕಾರ್ಯನಿರ್ವಹಿಸುವ ಅಂಪೈರ್​ಗಳೇ ಆಗಲಿ, ನಿರ್ದಿಷ್ಟ ಸಮಯದ ಬಳಿಕ ನಿವೃತ್ತಿಯಾಗುವರು. ಆದರೆ, ಅಂಕಿ- ಅಂಶ ತಜ್ಞರಿಗೆ ನಿವೃತ್ತಿ ಎಂಬುದೇ ಇಲ್ಲ ಎನ್ನುತ್ತಾರೆ 71 ವರ್ಷ ಗೋಪಾಲಕೃಷ್ಣ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರದಿಂದ (ಜೂನ್14) ಅಫ್ಘಾನಿಸ್ತಾನ ತಂಡ ಚೊಚ್ಚಲ ಟೆಸ್ಟ್ ಪಂದ್ಯ ಆಡಲಿದೆ. ಗೋಪಾಲಕೃಷ್ಣ ಅವರು 100ನೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅಂಕಿ-ಅಂಶಗಳ ವರದಿಗೆ ಸಜ್ಜಾಗಿದ್ದಾರೆ. ಇದುವರೆಗೂ 37 ಟೆಸ್ಟ್, 57 ಏಕದಿನ ಹಾಗೂ 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಕಿ-ಅಂಶ ತಜ್ಞರಾಗಿ ಕಾರ್ಯನಿರ್ವಹಿಸಿರುವ ಅವರು, ಇದೀಗ ಶತಕದ ಸನಿಹಕ್ಕೆ ಬಂದು ನಿಂತಿದ್ದಾರೆ.

ಚಿನ್ನಸ್ವಾಮಿಯೇ ಎರಡನೇ ಮನೆ: ಬಹುತೇಕ ಮಂದಿ ನಿವೃತ್ತಿ ಜೀವನವನ್ನು ವಿವಿಧ ಮಾದರಿಯಲ್ಲಿ ಕಳೆದರೆ, ಗೋಪಾಲಕೃಷ್ಣ ಅವರಿಗೆ ಮಾತ್ರ ಚಿನ್ನಸ್ವಾಮಿ ಸ್ಟೇಡಿಯಂ ಎರಡನೇ ಮನೆಯಾಗಿದೆ. ಯಾವುದೇ ಪಂದ್ಯಗಳಿದ್ದರೂ ಖುದ್ದು ಹಾಜರಾಗುವ ಗೋಪಾಲಕೃಷ್ಣ, 70ರ ದಶಕದಿಂದಲೂ ಚಿನ್ನಸ್ವಾಮಿ ಸ್ಟೇಡಿಯಂನ ಕಾಯಂ ಸದಸ್ಯರಾಗಿದ್ದಾರೆ. 1972ರಲ್ಲಿ ಮೈಸೂರು ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ನಡೆದ ಅಂಪೈರ್​ಗಳ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಗೋಪಾಲಕೃಷ್ಣ ಅವರು, ಕೆಲ ಪಂದ್ಯಗಳಿಗೆ ಅಂಪೈರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ 1974ರಿಂದ ಅಂಕಿ-ಅಂಶದ ಜತೆಗೆ ಸ್ಕೋರರ್ ಆಗಿ ಕಾರ್ಯ ಶುರುಮಾಡಿದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 1974-75ರಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅಂಕಿ-ಅಂಶದ ಜತೆಗೆ ಸ್ಕೋರರ್ ಆಗಿದ್ದರು. ನಂತರ 1977ರಿಂದ ಪೂರ್ಣ ಪ್ರಮಾಣದಲ್ಲಿ ಅಂಕಿ-ಅಂಶ ಕಲೆಹಾಕಲು ನಿರ್ಧರಿಸಿದರು. ಬೆಂಗಳೂರು ಸೇರಿ ಏಕದಿನ ಹಾಗೂ ಟೆಸ್ಟ್ ನಡೆಯುವ ದೇಶದ ಎಲ್ಲ ಸ್ಟೇಡಿಯಂಗಳಲ್ಲೂ ಕಾರ್ಯನಿರ್ವಹಿಸಿದ ಕೀರ್ತಿ ಇವರದ್ದು. ಶ್ರೀಲಂಕಾದ ಕ್ಯಾಂಡಿಯಲ್ಲೂ ಟೆಸ್ಟ್ ಪಂದ್ಯದ ಅಂಕಿ-ಅಂಶ ನೀಡಿದ್ದಾರೆ. 70ರ ದಶಕದಿಂದೀಚೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಬಹುತೇಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಕಿ-ಅಂಶ ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.

ನೆನಪಿನ ಶಕ್ತಿಯೇ ಜೀವಾಳ

ನೆನಪಿನ ಶಕ್ತಿಯೇ ಅಂಕಿ-ಅಂಶದ ಗುಟ್ಟು ಎನ್ನುತ್ತಾರೆ, ಕಳೆದ 45 ವರ್ಷಗಳಿಂದ ಅಂಕಿ-ಅಂಶ ನೀಡುತ್ತಿರುವ ಗೋಪಾಲಕೃಷ್ಣ. ಆಲ್ ಇಂಡಿಯಾ ರೇಡಿಯೋದಲ್ಲಿ ವೀಕ್ಷಕ ವಿವರಣೆಕಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹಲವು ಕ್ರಿಕೆಟ್ ಅಂಕಿ-ಅಂಶ ಕುರಿತ ಉಪನ್ಯಾಸ ನೀಡಿದ್ದಾರೆ. ‘ಎ.ವಿ. ವೆಂಕಟನಾರಾಯಣ, ಕವಲೆ ಸುಬ್ಬರಾವ್, ಬಿ. ರಘುನಾಥ್ ನೀಡಿದ ಪ್ರೋತ್ಸಾಹವೇ ನಾನೊಬ್ಬ ಅಂಕಿ-ಅಂಶ ತಜ್ಞನಾಗಲು ಕಾರಣ. ನನ್ನಲ್ಲಿರುವ ನೆನಪಿನ ಶಕ್ತಿಯೇ ಇದರ ಜೀವಾಳ. ಬ್ಯಾಂಕ್​ನಲ್ಲಿದ್ದಾಗಲೂ ಕ್ರಿಕೆಟ್ ಮೇಲಿನ ಆಸಕ್ತಿ ಬಿಡಲಿಲ್ಲ. ನನ್ನ ಕಾರ್ಯದ ಬಗ್ಗೆ ತೃಪ್ತಿಯಿದೆ’ ಎನ್ನುತ್ತಾರೆ ಗೋಪಾಲಕೃಷ್ಣ. ಬ್ಯಾಟ್ಸ್​ಮನ್​ಗಳು ಬ್ಯಾಟಿಂಗ್​ನಲ್ಲಿ ಶತಕ ಬಾರಿಸಿದರೆ, ನಾನು ಸ್ಟಾ್ಯಟ್ಸ್​ನಲ್ಲಿ ಸೆಂಚುರಿ ಬಾರಿಸುತ್ತಿರುವೆ ಎಂದರು. ವಿಶ್ವನಾಥ್-ಸುನೀಲ್ ಗಾವಸ್ಕರ್, ಸಚಿನ್-ದ್ರಾವಿಡ್, ರಾಹುಲ್-ಕೊಹ್ಲಿ ಹೀಗೆ ಕ್ರಿಕೆಟ್​ನಲ್ಲಿ ಹಲವು ತಲೆಮಾರು ನೋಡಿರುವೆ. ನನ್ನ ಸಾಧನೆ ಬಗ್ಗೆ ತುಂಬಾ ಖುಷಿ ಇದೆ ಎಂದು ಹೇಳಿಕೊಳ್ಳುತ್ತಾರೆ.

ಓದ್ದಿದ್ದು ಇಂಜಿನಿಯರಿಂಗ್, ಸೇರಿದ್ದು ಬ್ಯಾಂಕ್

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹಿರೀಸಾವೆಯವರಾದ ಗೋಪಾಲಕೃಷ್ಣ, ಐದನೇ ವಯಸ್ಸಿನಿಂದಲೂ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಇಂಜಿನಿಯರ್ ಪದವಿಧರರಾಗಿರುವ ಅವರು, ಖಾಸಗಿ ಬ್ಯಾಂಕ್​ನಲ್ಲಿ ವೃತ್ತಿ ನಡೆಸಿ ನಿವೃತ್ತರಾಗಿದ್ದಾರೆ. ನನ್ನ ಎರಡನೇ ಮಗ ಕ್ರಿಕೆಟ್ಕಿಕ್ ಡಾಟ್ ಕಾಮ್ ವೆಬ್​ಸೈಟ್ ಆರಂಭಿಸಿದ್ದಾನೆ. ವಿಶ್ವಕಪ್ ವೇಳೆ ಅದಕ್ಕೆ ಸುಮಾರು 9 ಲಕ್ಷ ಲೈಕ್​ಗಳು ಬಂದಿದ್ದವು. ಬಳಿಕ ಎಚ್​ಆರ್​ಜಿಕ್ರಿಕ್​ಸ್ಟಾ್ಯಕ್ಸ್ ಡಾಟ್ ಕಾಮ್ ವೆಬ್​ಸೈಟ್ ನೋಡಿಕೊಳ್ಳುತ್ತಿದ್ದೇನೆ ಎಂದರು. ಇದಕ್ಕೆ ರ್ಕಿಗಿಸ್ತಾನ, ಕೆನಡ, ಅಮೆರಿಕ ಸೇರಿ ಕ್ರಿಕೆಟ್ ಆಸಕ್ತಿ ಇರುವ ಎಲ್ಲ ದೇಶಗಳಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Leave a Reply

Your email address will not be published. Required fields are marked *

Back To Top